ಇನ್ನೂ ಮಳೆ ಚೆನ್ನಾಗಿ ಆಗದಿದ್ದ ಕಾರಣ ನಮಗೆ ಅಲ್ಲಿಯ ನೀರು ನೋಡಿ 'ಮುತ್ಯಾಲ ಮಡುವು ಇಷ್ಟೇನಾ!' ಅಂತ ಅನಿಸಿತು.
ಆದರೂ ಬೆಂಗಳೂರಿನ ಯಾಂತ್ರಿಕ ಜೀವನದಿಂದ ಬೇಸರವಾದಾಗ 'ಒಮ್ಮೆ' ಹೋಗಿ ಬರಬುಹದಾದಂತಹ ಸುಂದರ ಸ್ಥಳ.
ವಾರಾಂತ್ಯಗಳಲ್ಲಿ ಹೋಗಬಯಸಿದರೆ ಬೆಳಿಗ್ಗೆ ೮, 9 ಗಂಟೆ ಸುಮಾರಿಗೆ ಅಲ್ಲಿದ್ದರೆ ನೀವು ಝರಿಯ ನಾದ, ಹಕ್ಕಿಗಳ ಕಲರವ ಕೇಳಿ ಪ್ರಕೃತಿಯ ಶಾಂತತೆ ಸವಿಯಬಹುದು. ಇಲ್ಲವಾದಲ್ಲಿ ಮತ್ತೆ ಅದೇ ಜನರ ಗಲಾಟೆ ಗೌಜು!
ಬೆಂಗಳೂರಿನಿಂದ
ಬನ್ನೇರುಘಟ್ಟ ರಸ್ತೆ ----> ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ----> ಆನೇಕಲ್ ----> ಮುತ್ಯಾಲ ಮಡುವು
ಅಥವಾ
ಅತ್ತಿಬೆಲೆ ----> ಆನೇಕಲ್ ----> ಮುತ್ಯಾಲ ಮಡುವು
ಹೆಚ್ಚಿನ ಸ್ಥಳಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕ್ ಮಾಡಿ